ಸುಳ್ಯ : ಪೆರಾಜೆ ಸಮೀಪ ಪಾಲಡ್ಕ ಎಂಬಲ್ಲಿ ಐ20 ಕಾರು ಪಲ್ಟಿಯಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಶುಂಠಿಕೊಪ್ಪ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಐ20 ಕಾರು ಪಾಲಡ್ಕ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ರಸ್ತೆಯಿಂದ ಹೊರಕ್ಕೆ ಹೋಗಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
ಇನ್ನು ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಓರ್ವ ಮಹಿಳೆ ಹಾಗೂ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
Kshetra Samachara
02/05/2022 05:40 pm