ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹೊಳೆಗೆ ಹಾರಿ ಗದಗ ಮೂಲದ ಕೂಲಿ ಕಾರ್ಮಿಕ ಯುವಕ ಆತ್ಮಹತ್ಯೆ

ಮುಲ್ಕಿ: ಮುಲ್ಕಿ ಸಮೀಪದ ಕಟ್ಟದಂಗಡಿ ಓಲ್ಡ್ ಐಸ್ ಪ್ಲಾಂಟ್ ಬಳಿ ಹೊಳೆಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಯುವಕನನ್ನು ಗದಗ ಜಿಲ್ಲೆಯ ರೋಣ ತಾಲೂಕು ಮೆಣಸಿಗೆ ನಿವಾಸಿ ಮಲ್ಲೇಶ್ (32) ಎಂದು ಗುರುತಿಸಲಾಗಿದೆ.

ಮಲ್ಲೇಶ್ ಮುಲ್ಕಿ ಪರಿಸರದಲ್ಲಿ ಕಳೆದ ಕೆಲ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಇಂದು ಸಂಜೆ ಏಕಾಏಕಿ ಮುಲ್ಕಿ ಬಸ್ ನಿಲ್ದಾಣದ ಹಿಂಭಾಗ ಕೊಳಚಿಕಂಬಳ ರಸ್ತೆಯ ಕಟ್ಟದಂಗಡಿ ಓಲ್ಡ್ ಐಸ್ ಪ್ಲಾಂಟ್ ಬಳಿ ಶಾಂಭವಿ ಹೊಳೆಗೆ ಹಾರಿದ್ದಾನೆ.

ಈ ಸಂದರ್ಭ ಸ್ಥಳೀಯರಾದ ಸುಧೀರ್ ಪೂಜಾರಿ, ಹಿತೇಶ್ ಸಾಲಿಯಾನ್ ಎಂಬವರು ಯುವಕನನ್ನು ರಕ್ಷಿಸಲು ಪ್ರಯತ್ನಿಸಿದ್ದರೂ ಹೊಳೆಯಲ್ಲಿ ಸೆಳೆತವಿದ್ದ ಕಾರಣ ವಿಫಲರಾಗಿದ್ದಾರೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Edited By : Nagesh Gaonkar
Kshetra Samachara

Kshetra Samachara

26/04/2022 11:02 pm

Cinque Terre

20.83 K

Cinque Terre

0

ಸಂಬಂಧಿತ ಸುದ್ದಿ