ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ; ಅಪಘಾತದಲ್ಲಿ ಆಪದ್ಭಾಂಧವ ಕೂದಲೆಳೆಯಲ್ಲಿ ಪಾರು, ವಿಡಿಯೋ ವೈರಲ್ !

ಮಲ್ಪೆ: ಜಿಲ್ಲೆಯ ಯಾವುದೇ ಭಾಗದ ಕಡಲು ಅಥವಾ ನದಿಯಲ್ಲಿ ದುರಂತ ಸಂಭವಿಸಿದರೂ ಕ್ಷಣ ಮಾತ್ರದಲ್ಲಿ ನೆರವಿಗೆ ಧಾವಿಸುವ ಆಪದ್ಭಾಂಧವ ಈಶ್ವರ್ ಮಲ್ಪೆ ,ಇವತ್ತು ಸಾವಿನ‌ ಜೊತೆ ಮುಖಾಮುಖಿಯಾಗಿ ಗೆದ್ದು ಬಂದಿದ್ದಾರೆ.

ಮಲ್ಪೆಯ ವಢಬಾಂಡೇಶ್ವರದಲ್ಲಿ ಇವರ ಬೈಕ್ ಮತ್ತು ಬಸ್ಸೊಂದು ಮುಖಾಮುಖಿ ಢಿಕ್ಕಿ ಹೊಡೆದರೂ ಕೂದಲೆಳೆಯಲ್ಲಿ ಇವರು ಪಾರಾಗಿದ್ದಾರೆ.ಈ ಅಪಘಾತದ ವಿಡಿಯೋ ವೈರಲ್ ಆಗಿದ್ದು. ಸಣ್ಣಪುಟ್ಟ ಗಾಯಗಳೊಂದಿಗೆ ಈಶ್ವರ್ ಪಾರಾಗಿದ್ದಾರೆ. ಸದ್ಯ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಮಲ್ಪೆ ಭಾಗದ ಜನ ಈಶ್ವರ್ ಮಲ್ಪೆಯ ಆರೋಗ್ಯ ವಿಚಾರಿಸಲು ಮನೆಗೆ ಧಾವಿಸುತ್ತಿದ್ದು ಅವರು ಮಾಡಿದ ಪರೋಪಕಾರವೇ ಅವರ ಜೀವ ಉಳಿಸಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

26/04/2022 04:55 pm

Cinque Terre

20.7 K

Cinque Terre

11

ಸಂಬಂಧಿತ ಸುದ್ದಿ