ಬಜಪೆ: ಬೃಹತ್ ಗಾತ್ರದ ಹಿಟಾಚಿಯನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ಸೈಡ್ ನೀಡಲು ಹೋಗಿ ಪಲ್ಟಿಯಾದ ಪರಿಣಾಮ ಲಾರಿಯ ಮೇಲಿದ್ದ ಬೃಹತ್ ಗಾತ್ರದ ಹಿಟಾಚಿ ರಸ್ತೆಯಂಚಿನ ಚರಂಡಿಗೆ ಬಿದ್ದ ಘಟನೆ ಮಂಗಳೂರು - ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿಯ ತಿರುವಿನ ವಿವೇಕಾನಂದ ಪದವಿ ಪೂರ್ವ ಕಾಲೇಜು ಬಳಿ ಇಂದು ನಡೆದಿದೆ.
ಘಟನೆಯಿಂದ ಮಂಗಳೂರು - ಮೂಡಬಿದಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
Kshetra Samachara
18/04/2022 09:43 pm