ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಂಟೈನರ್ ನಲ್ಲಿ ದಿಢೀರ್ ‌ಬೆಂಕಿ!; ತಪ್ಪಿದ ದುರಂತ

ಮಂಗಳೂರು: ಗೋವಾದಿಂದ ತ್ರಿಶ್ಶೂರ್ ಕಡೆಗೆ ಬರುತ್ತಿದ್ದ ಕಂಟೈನರ್ ನಗರದ ಪಣಂಬೂರು ಎನ್ಎಂಪಿಟಿ ತಲುಪುತ್ತಿದ್ದಂತೆ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ರಾತ್ರಿ 7.30 ಸುಮಾರಿಗೆ ಸಂಭವಿಸಿದೆ.

ಈ ಕಂಟೈನರ್ ವಾಹನ ಎನ್ಎಂಪಿಟಿಯ ಮುಖ್ಯದ್ವಾರ ಬಳಿ ತಲುಪುತ್ತಿದ್ದಂತೆ ವಾಹನದ ಕ್ಯಾಬಿನ್ ಹಾಗೂ ಬಾಡಿಯ ಹಿಂಭಾಗದ ಮಧ್ಯ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಚಾಲಕ ಕಂಟೈನರ್ ಅನ್ನು ರಸ್ತೆ ಬದಿಗೆ ತಂದು ನಿಲ್ಲಿಸಿದ್ದಾನೆ. ಈ ಸಂದರ್ಭ ಅಲ್ಲಿಯೇ ಸಂಚರಿಸುತ್ತಿದ್ದ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು ಎನ್ಎಂಪಿಟಿಯ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿರುವುದರಿಂದ ವಾಹನಕ್ಕೆ ಯಾವುದೇ ತೊಂದರೆಯಾಗಿಲ್ಲ. ಕಂಟೈನರ್ ವಾಹನದ ಎಂಜಿನ್ ಶಾರ್ಟ್ ಸರ್ಕಿಟ್ ನಿಂದಾಗಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

Edited By : Nagesh Gaonkar
Kshetra Samachara

Kshetra Samachara

11/04/2022 10:59 pm

Cinque Terre

19.31 K

Cinque Terre

0