ಕಡಬ : ಶಾಲೆ ಮುಗಿಸಿ ಮನೆಗೆ ಬಂದ ಬಾಲಕನೊಬ್ಬ ಪೇರಾಳ ಹಣ್ಣು ಕೊಯ್ಯಲು ಮರ ಹತ್ತಿ ಆಯತಪ್ಪಿ ಮರದಿಂದ ಬಿದ್ದು ಮೃತಪಟ್ಟ ಧಾರುಣ ಘಟನೆ ಕಡಬ ತಾಲೂಕಿನ ದೋಳ್ಪಾಡಿ ಬಳಿ ಮಾ.17 ರ ಸಂಜೆ ನಡೆದಿದೆ.
ದೋಳ್ಪಾಡಿ ಮರಕ್ಕಡ ಮನೆಯ ದಿವಾಕರ ಗೌಡರವರ ಪುತ್ರ ಉಲ್ಲಾಸ್ ಡಿ.ಎಂ (8) ಮೃತ ಬಾಲಕ. ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ಉಲ್ಲಾಸ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ.
ಸದ್ಯ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತ ಉಲ್ಲಾಸ್ ತಂದೆ ದಿವಾಕರ್ , ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.
Kshetra Samachara
18/03/2022 08:53 am