ಬೆಳ್ತಂಗಡಿ: ಅಂಗಳದಲ್ಲಿ ಇರಿಸಲಾಗಿದ್ದ ಕೆಂಪು ಕಲ್ಲಿನ ಅಟ್ಟಿ ಮಗುಚಿ ಬಿದ್ದು ಮೂರೂವರೆ ವರ್ಷ ಪ್ರಾಯದ ಗಂಡು ಮಗುವೊಂದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಬಾಯ್ತಾರು ಎಂಬಲ್ಲಿ ಫೆ .28 ರಂದು ಸಾಯಂಕಾಲ ಸಂಭವಿಸಿದೆ.
ಅಶ್ರಫ್ ಮತ್ತು ಸಮೀಮಾ ದಂಪತಿಯ ಮಗ ಮೊಹಮ್ಮದ್ ನೌಶೀರ್ ಮೃತಪಟ್ಟ ಮಗು ಎಂದು ತಿಳಿದು ಬಂದಿದೆ. ಕಟ್ಟಡ ನಿರ್ಮಾಣಕ್ಕೆಂದು ಮನೆಯಂಗಳದಲ್ಲಿ ತಂದಿರಿಸಲಾಗಿದ್ದ ಕೆಂಪು ಕಲ್ಲಿನ ಅಟ್ಟಿಯ ಬಳಿ ಮಗು ನೌಶೀರ್ ಆಟವಾಡುತ್ತಿದ್ದ ವೇಳೆ ಕಲ್ಲಿನ ಅಟ್ಟಿಯು ಮಗುಚಿ ಆತನ ಮೇಲೆಯೇ ಬಿದ್ದಿತ್ತು.
ಪರಿಸರದಲ್ಲಿ ಆಟವಾಡುತ್ತಿದ್ದ ಮಗು ಕಾಣದಾದಾಗ ಮನೆ ಮಂದಿ ಹುಡುಕಾಟ ನಡೆಸಿದರು.ಈ ವೇಳೆ ಅಂಗಳದಲ್ಲಿಟ್ಟಿದ್ದ ಕಲ್ಲಿನ ಅಟ್ಟಿಯು ಬಿದ್ದಿರುವುದನ್ನು ಕಂಡು ಅಲ್ಲಿ ಹುಡುಕಿದಾಗ ಮಗು ಕಲ್ಲಿನ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿರುವುದು ಕಂಡು ಬಂದಿತ್ತು ಎನ್ನಲಾಗಿದೆ.
Kshetra Samachara
01/03/2022 02:57 pm