ಬಂಟ್ವಾಳ: ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಏಲಬೆಯಲ್ಲಿ ಕಲ್ಲಿನ ಕೋರೆಯ ಹೊಂಡದಲ್ಲಿದ್ದ ನೀರಿಗೆ ಸ್ನಾನಕ್ಕೆಂದು ಇಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ.
ಸ್ಥಳೀಯ ನಿವಾಸಿ ಜಗದೀಶ್(45) ಹಾಗೂ ಅಲ್ಲಿಪಾದೆ ನಿವಾಸಿ ಹಾಗೂ ಬಂಟ್ವಾಳ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ನಿದೀಶ್(17) ಮೃತಪಟ್ಟವರು.
ಸಂಜೆ ವೇಳೆ ತೆರೆದ ಕಲ್ಲು ಕೋರೆಗೆ ಸ್ನಾನಕ್ಕೆಂದು ಅವರು ಇಳಿದಿದ್ದರು. ಆ ವೇಳೆ ಹೊಂಡ ಇರುವುದು ತಿಳಿಯದೆ ಮೃತಪಟ್ಟಿರುವ ಸಾಧ್ಯತೆ ಇದೆ. ಮೃತ ನಿದೀಶ್ ಅಕ್ಕನ ಮನೆಗೆ ತೆರಳಿದ್ದ ಎನ್ನಲಾಗಿದೆ. ಬಂಟ್ವಾಳ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
Kshetra Samachara
26/02/2022 10:13 am