ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ನಡುರಸ್ತೆಯಲ್ಲೇ ಹೊತ್ತಿ ಉರಿದ ಖಾಸಗಿ ಬಸ್ : ಪ್ರಯಾಣಿಕರು ಪಾರು!

ಮಣಿಪಾಲ: ಮಣಿಪಾಲದಲ್ಲಿ ಇಂದು ನಡು ರಸ್ತೆಯಲ್ಕೇ ಬಸ್ ಒಂದು ಸುಟ್ಟು ಕರಕಲಾದ ಘಟನೆ ಸಂಭವಿಸಿದೆ.ಮುಂಜಾನೆ ನಾಲ್ಕೂವರೆ ಸುಮಾರಿಗೆ ಈ ಘಟನೆ ನಡೆದಿದೆ.

ಬೆಂಗಳೂರಿನಿಂದ ಮಣಿಪಾಲಕ್ಕೆ ಬರುತಿದ್ದ ಖಾಸಗಿ ಬಸ್ ನಲ್ಲಿ ಅಕಸ್ಮಾತ್ ಬೆಂಕಿ ಕಾಣಿಸಿಕೊಂಡಿತು.ಈ ವೇಳೆ ಬೆಂಗಳೂರಿನಿಂದ ಮಣಿಪಾಲಕ್ಕೆ ಆಗಮಿಸಿದ್ದ ಪ್ರಯಾಣಿಕರನ್ನು ಕೆಳಕ್ಕಿಳಿಸಲಾಯಿತು.ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಇಡೀ ಬಸ್ ಗೆ ಆವರಿಸಿ ಬಸ್ ಬೆಂಕಿಗಾಹುತಿಯಾಯಿತು.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮಣಿಪಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

Edited By : Shivu K
Kshetra Samachara

Kshetra Samachara

23/02/2022 08:51 am

Cinque Terre

18.24 K

Cinque Terre

0

ಸಂಬಂಧಿತ ಸುದ್ದಿ