ಪಡುಬಿದ್ರಿ: ಫೆ. 19ರಂದು ಇಬ್ಬರು ಗೆಳೆಯರೊಂದಿಗೆ ಕಡಲಿಗೆ ಈಜಲು ಹೋಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಪಡುಬಿದ್ರಿ ನಡ್ಡಾಲು ಅಡಿಪುತೋಟ ನಿವಾಸಿ ರಘುರಾಮ ದೇವಾಡಿಗ ಅವರ ಪುತ್ರ ಧನುಷ್ (19) ಅವರ ಮೃತದೇಹ ಪಡುಬಿದ್ರಿ ಕಾಡಿಪಟ್ಣ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.
ಆತನೊಂದಿಗೆ ಈಜಲು ಹೋಗಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದರು. ಆದರೆ ಧನುಷ್ ಮೃತದೇಹ ಸಿಕ್ಕಿರಲಿಲ್ಲ.ಮೃತ ಧನುಷ್ ತಂದೆ, ತಾಯಿ ಹಾಗೂ ಕಿರಿಯ ಸಹೋದರನನ್ನು ಅಗಲಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹವನ್ನು ಬಿಟ್ಟುಕೊಡಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
Kshetra Samachara
21/02/2022 12:47 pm