ಬಂಟ್ವಾಳ: ಆಟೋಗ್ಯಾಸ್ ಸಿಲಿಂಡರ್ ಕತ್ತರಿಸುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿ ಇಂದು ಸಂಜೆ ನಡೆದಿದೆ. ಬಂಟ್ವಾಳ ಕಾರಾಜೆ ನಿವಾಸಿ ಅಬ್ದುಲ್ ರಝಾಕ್ (62) ಗಾಯಗೊಂಡವರು.
ಗುಜರಿ ವ್ಯಾಪಾರಿ ಅಮ್ಮೆಮಾರ್ ನಿವಾಸಿ ತಸ್ಲೀಮ್ ಎಂಬವರ ಮನೆಯಲ್ಲಿ ಗುಜರಿಗೆ ಬಂದಿದ್ದ ಆಟೋ ಗ್ಯಾಸ್ ಸಿಲಿಂಡರ್ ಕತ್ತರಿಸಲು ಅಬ್ದುಲ್ ರಝಾಕ್ ಆಟೋರಿಕ್ಷಾದಲ್ಲಿ ಬಂದಿದ್ದು, ಸಿಲಿಂಡರ್ ಕತ್ತರಿಸುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಅಬ್ದುಲ್ ರಝಾಕ್ ಗಾಯಗೊಂಡಿದ್ದು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಬಂದಿದ್ದ ಆಟೋರಿಕ್ಷಾ ಭಸ್ಮವಾಗಿದ್ದು, ಸಮೀಪದ ಮನೆಗಳ ಗೋಡೆಗಳೂ ಬಿರುಕು ಬಿಟ್ಟಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
29/01/2022 10:28 pm