ಬಂಟ್ವಾಳ: ತೆಂಗಿನಮರ ಕಡಿಯುವ ವೇಳೆ ಯುವಕನೋರ್ವನ ಮೈ ಮೇಲೆಯೇ ಮರ ಬಿದ್ದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಶಂಭೂರು ಗ್ರಾಮದ ನಾಯಿಲದಲ್ಲಿ ಸಂಭವಿಸಿದೆ. ನಾಯಿಲ ಬೆಟ್ಟುಗದ್ದೆ ನಿವಾಸಿ ದಿ.ಪೂವಪ್ಪ ಪೂಜಾರಿ ಅವರ ಪುತ್ರ, ನವ ವಿವಾಹಿತ ಯತಿರಾಜ್(37) ಮೃತಪಟ್ಟವರು.
ಸ್ಥಳೀಯ ಕೃಷಿಕರೋರ್ವರ ತೋಟದಲ್ಲಿ ತೆಂಗಿನಮರ ಕಡಿಯುವಾಗ ದುರ್ಘಟನೆ ಸಂಭವಿಸಿದ್ದು, ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆದಾಗಲೇ ಮೃತಪಟ್ಟಿದ್ದರು. ಯತಿರಾಜ್ ಗೆ 4 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಅವರು ಮರ ಕಡಿಯುವ ಕೆಲಸದ ಗುತ್ತಿಗೆ ವಹಿಸುತ್ತಿದ್ದರು.
Kshetra Samachara
09/01/2022 05:54 pm