ಬಜಪೆ:ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ರಸ್ತೆ ಬದಿಯ ಚರಂಡಿಗೆ ಸರಿದ ಘಟನೆ ಬಜಪೆ ಸಮೀಪದ ಅದ್ಯಪಾಡಿ ಎಂಬಲ್ಲಿ ಇಂದು ನಡೆದಿದೆ.
ಎದುರುಗಡೆಯಿಂದ ಬಂದ ವಾಹನವೊಂದಕ್ಕೆ ಸೈಡ್ ಕೊಡುವ ಸಂದರ್ಭದಲ್ಲಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಚರಂಡಿಗೆ ಸರಿದು ನಿಂತಿದೆ.
ಬಜಪೆಯಿಂದ ಅದ್ಯಪಾಡಿಗೆ ನೂತನವಾಗಿ ಪ್ರಾರಂಭ ಗೊಂಡ ಬಸ್ಸು ಇದಾಗಿದೆ.ಅದ್ಯಪಾಡಿ ರಸ್ತೆಯು ತೀರಾತಿರುವಿನಿಂದ ಕೂಡಿದ ರಸ್ತೆಯಾಗಿದ್ದು,ರಸ್ತೆ ಕೂಡ ಇಕ್ಕಟ್ಟಾಗಿದೆ.ಈ ಹಿಂದೆ ಕೂಡ ಕೆಲ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿತ್ತು ಅನ್ನುತ್ತಾರೆ ಸ್ಥಳೀಯರು.
Kshetra Samachara
03/01/2022 06:48 pm