ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ತಿರುವು ಬಳಿ ಆಟೋ ಗೆ ಕಾರು ಡಿಕ್ಕಿಯಾಗಿ ಮೂವರು ಪವಾಡಸದೃಶ ಪಾರಾಗಿದ್ದಾರೆ.
ಮುಲ್ಕಿ ಕಡೆಯಿಂದ ಮೂಡಬಿದ್ರೆ ಬೆಳುವಾಯಿ ಮಾರ್ನಾಡು ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾ ಗೆ ಕೆಂಚನಕೆರೆ ಅಪಾಯಕಾರಿ ತಿರುವು ಬಳಿ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು ಕೂಡಲೇ ಕಾರು ಚಾಲಕ ಮಂಗಳೂರು ನಿವಾಸಿ ಅನಿಲ್ ಎಂಬವರು ರಿಕ್ಷಾ ಕೆಳಗಡೆ ಸಿಲುಕಿದವರನ್ನು ರಕ್ಷಿಸಿದ್ದಾರೆ.
ರಿಕ್ಷಾದಲ್ಲಿದ್ದ ಮಾರ್ನಾಡು ನಿವಾಸಿಗಳಾದ ತಾಯಿರಾ, ಸೌಧಾ, ಝೀನತ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮುಲ್ಕಿ-ಮೂಡಬಿದ್ರೆ ರಾಜ್ಯ ಹೆದ್ದಾರಿಯ ಕೆಂಚನಕೆರೆ ಕುಬೆವೂರು ರಾಜ್ಯ ಹೆದ್ದಾರಿ ತಿರುವಿನಲ್ಲಿ ಬೃಹದಾಕಾರವಾಗಿ ಅಪಾಯಕಾರಿ ಹುಲ್ಲು ಬೆಳೆದಿದ್ದು ಎದುರಿನಿಂದ ಬರುವ ವಾಹನ ಕಾಣಿಸದೆ ಅಪಘಾತ ನಡೆದಿದೆ. ಕೂಡಲೆ ಲೋಕೋಪಯೋಗಿ ಇಲಾಖೆ ಎಚ್ಚೆತ್ತು ಹೆದ್ದಾರಿ ಬದಿಯ ಹುಲ್ಲನ್ನು ಕಟಾವು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
30/12/2021 08:04 pm