ಮಲ್ಪೆ: ಮಲ್ಪೆ ಬಾಪುತೋಟ ಬಳಿ ಬೋಟುಗಳ ತಂಗುದಾಣದಲ್ಲಿ ಇವತ್ತು ಅವಘಡವೊಂದು ಸಂಭವಿಸಿದ್ದು, ಆಪತ್ಪಾಂಧವ ಖ್ಯಾತಿಯ ಈಶ್ವರ್ ಮಲ್ಪೆ ಸಕಾಲಕ್ಕೆ ಧಾವಿಸಿ ಪ್ರಾಣಹಾನಿಯಾಗುವುದನ್ನು ತಪ್ಪಿಸಿದ್ದಾರೆ.
ಸ್ಥಳೀಯರಾದ ಚಂದ್ರ ಸುವರ್ಣ ಎಂಬವರ ಆಟೋರಿಕ್ಷಾ ಸಮುದ್ರದ ನೀರಿಗೆ ಬಿದ್ದಿತ್ತು. ಎಂದಿನಂತೆ ಈಶ್ವರ್ ಮಲ್ಪೆಯವರಿಗೆ ಸುದ್ದಿ ಮುಟ್ಟಿಸಲಾಯಿತು.
ತಕ್ಷಣ ಕಾರ್ಯಪ್ರವೃತ್ತರಾದ ಈಶ್ವರ್, ಚಾಲಕನನ್ನು ಬಚಾವ್ ಮಾಡಿ, ಆಟೋವನ್ನೂ ಮೇಲಕ್ಕೆತ್ತಿದ್ದಾರೆ.
ಮಲ್ಪೆ ಪರಿಸರದ ಆಪತ್ಪಾಂಧವ ಎಂದೇ ಕರೆಸಿಕೊಳ್ಳುವ ಈಶ್ವರ್ ಮಲ್ಪೆ ಅವರ ಈ ಸಕಾಲಿಕ ನೆರವು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
Kshetra Samachara
13/12/2021 01:49 pm