ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರೂರು: ಟೋಲ್ ಕಂಬಕ್ಕೆ ಕಾರು ಡಿಕ್ಕಿ; ಭದ್ರತಾ ಸಿಬ್ಬಂದಿ ಸಾವು, ಸ್ಥಳೀಯರ ಆಕ್ರೋಶ, ಪ್ರತಿಭಟನೆ

ಶಿರೂರು: ಇಲ್ಲಿನ ಟೋಲ್ ಗೇಟ್ ಬಳಿ ಇಂದು ಮುಂಜಾನೆ ಮತ್ತೊಂದು ಅವಘಡ ನಡೆದಿದೆ. ನಸುಕಿನ ಸುಮಾರು 2 ಗಂಟೆ ವೇಳೆಗೆ ವೇಗವಾಗಿ ಬಂದ ಕಾರು ಟೋಲ್ ಗೇಟ್ ಮುಂಭಾಗದ ಗೋಡೆಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರೂ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಅಪಘಾತ ಬಳಿಕ ಟೋಲ್ ಗೇಟ್ ನಿರ್ಲಕ್ಷ್ಯ ಹಾಗೂ ಸ್ಥಳೀಯರಿಗೆ ಮನ್ನಣೆ ನೀಡದಿರುವ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ವಿವಿಧ ಸಂಘಟನೆಗಳು ಸೇರಿ ಅವ್ಯವಸ್ಥೆ ಕುರಿತು ಎಚ್ಚರಿಕೆ ನೀಡಿದ್ದರೂ ಟೋಲ್ ಅಧಿಕಾರಿಗಳು ಸುಧಾರಿಸಿಲ್ಲ. ಮಾತ್ರವಲ್ಲ, ಟೋಲ್ ಮ್ಯಾನೇಜರ್ ಕರೆ ಸ್ವೀಕರಿಸಿಲ್ಲ.

ರಾತ್ರಿ ದುರ್ಘಟನೆ ನಡೆದರೂ ಬೆಳಿಗ್ಗೆ ತನಕ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ. ಸೂಕ್ತ ಪರಿಹಾರ ನೀಡಿ, ಕ್ರಮಕೈಗೊಳ್ಳದಿದ್ದರೆ ಟೋಲ್ ಗೇಟ್ ಎದುರೇ ಶವ ಇಟ್ಟು ಪ್ರತಿಭಟಿಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಬಳಿಕ ಟೋಲ್ ಅಧಿಕಾರಿಗಳು ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದು, ನ್ಯಾಯಯುತ ಪರಿಹಾರ ದೊರೆಯುವವರೆಗೂ ಹಿಂದಿರುಗುವುದಿಲ್ಲ ಎಂದು ಸ್ಥಳೀಯ ನಾಗರಿಕರು ಪಟ್ಟು ಹಿಡಿದಿದ್ದಾರೆ.

Edited By : Manjunath H D
Kshetra Samachara

Kshetra Samachara

13/12/2021 11:30 am

Cinque Terre

15.44 K

Cinque Terre

0

ಸಂಬಂಧಿತ ಸುದ್ದಿ