ಮಲ್ಪೆ : ನಿನ್ನೆ ಮಧ್ಯರಾತ್ರಿ ಮಲ್ಪೆ ಬಂದರಿನ ದಕ್ಕೆಯಲ್ಲಿ ಶೌಚಾಲಯಕ್ಕೆ ಹೋಗಿದ್ದ ಆಂಧ್ರ ಮೂಲದ ಮಂಜು ಆಕಸ್ಮಿಕ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿದ್ದಾರೆ . ತಕ್ಷಣ ದಡದ ಮೇಲಿದ್ದ ಬೋಟಿನ ಜನರಿಗೆ ನೆನಪಾಗಿದ್ದೆ ಆಪತ್ಬಾಂಧವ ಈಜು ತಜ್ಞ ಈಶ್ವರ್ ಮಲ್ಪೆ .
ಹೌದು ತಕ್ಷಣ 5 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಮುಳುಗುತ್ತಿರುವ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಮೇಲಕ್ಕೆತ್ತಿದ್ದಾರೆ .
ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಕ್ಷಣ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಿದ್ದಾರೆ.
Kshetra Samachara
03/12/2021 03:32 pm