ಮುಲ್ಕಿ: ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿಯ ಬಟ್ಟಕೋಡಿ ಪೆಟ್ರೋಲ್ ಪಂಪ್ ಬಳಿ ಚಾಲಕನಿಲ್ಲದ ವಾಹನ ಹಿಮ್ಮುಖ ಚಲಿಸಿ, ಪೆಟ್ರೋಲ್ ಪಂಪ್ ಗೆ ಹಾನಿಯಾದ ಘಟನೆ ನಡೆದಿದೆ.
ಶಿಬರೂರು ದ್ವಾರದ ಹತ್ತಿರ ಚಾಲಕ ಹಾಲಿನ ಟೆಂಪೋವನ್ನು ತಗ್ಗುರಸ್ತೆಯಲ್ಲಿ ನಿಲ್ಲಿಸಿ ಅಂಗಡಿಗೆ ತೆರಳಿದ್ದ. ನಿಂತಿದ್ದ ಈ ಟೆಂಪೋ ಏಕಾಏಕಿ ಹಿಮ್ಮುಖವಾಗಿ ಚಲಿಸಿ ನೇರವಾಗಿ ಕೆಳಭಾಗದಲ್ಲಿದ್ದ ಪೆಟ್ರೋಲ್ ಪಂಪ್‌ನ ಪೆಟ್ರೋಲ್ ಹಾಕುವ ಯಂತ್ರಕ್ಕೆ ಗುದ್ದಿ ಬಿಟ್ಟಿದೆ.
ಅದೃಷ್ಟವಶಾತ್ ಈ ಸಂದರ್ಭ ಪೆಟ್ರೋಲ್ ಪಂಪ್ ನಲ್ಲಿ ಯಾವುದೇ ವಾಹನ ಹಾಗೂ ಪಂಪ್ ಸಿಬಂದಿ ಇಲ್ಲದಿರುವುದರಿಂದ ದೊಡ್ಡ ಅನಾಹುತ ತಪ್ಪಿದೆ.
ಘಟನೆಯ ದೃಶ್ಯ ಪೆಟ್ರೋಲ್ ಪಂಪ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Kshetra Samachara
26/11/2021 09:44 pm