ಸುರತ್ಕಲ್: ಸುರತ್ಕಲ್ ಸಮೀಪದ ಕೃಷ್ಣಾಪುರ ಚೊಕ್ಕಬೆಟ್ಟು ಹಿಲ್ ಸೈಡ್ 2ನೇ ಅಡ್ಡ ರಸ್ತೆಯಲ್ಲಿ ಸ್ಕೂಟರ್ ಸ್ಕಿಡ್ ಆಗಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ
ಗಾಯಾಳುವನ್ನು ಕೃಷ್ಣಾಪುರ ನಿವಾಸಿ ವಿನೋದ್ ರಾಜ್ ಎಂದು ಗುರುತಿಸಲಾಗಿದೆ.ಗಾಯಾಳು ವಿನೋದ್ ರಾಜ್ ತನ್ನ ತಮ್ಮ ಮಹೇಶ್ ರರ ಕೆಎ-19-ಇಆರ್-3087 ನಂಬ್ರದ ಸ್ಕೂಟರಿನಲ್ಲಿ ಕೃಷ್ಣಾಪುರ ಚೊಕ್ಕಬೆಟ್ಟು ಹಿಲ್ ಸೈಡ್ 2ನೇ ಅಡ್ಡ ರಸ್ತೆಯ ಸಮೀಪ ಬಂದ ಸಂದರ್ಭ ನಾಯಿಯೊಂದು ಅಡ್ಡ ಬಂದಿದ್ದು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ಮೇಲಿನ ಹತೋಟಿ ತಪ್ಪಿ ಮಹೇಶ್ ರವರು ಸ್ಕೂಟರ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು ಅಪಘಾತ ಸಂಭವಿಸಿದೆ .
ಅಪಘಾತದಿಂದ ಮಹೇಶ್ ರವರ ಬಲಕೈ ಮೊಣಗಂಟಿನ ಬಳಿ ತರಚಿದ ರೀತಿಯ ರಕ್ತಗಾಯ, ತಲೆಗೆ ಗುದ್ದಿದ ರೀತಿಯ ಗಾಯವಾಗಿದ್ದು ಮಂಗಳೂರು ಅತ್ತಾವರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/11/2021 09:51 pm