ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಮಾಣಿಯಲ್ಲಿ ಆಕ್ಸಿಡೆಂಟ್ ವೇಳೆ ಚಕಮಕಿ, ಲಾಠಿ ಚಾರ್ಜ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಎರಡು ಕಾರುಗಳ ನಡುವೆ ಢಿಕ್ಕಿ ಸಂಭವಿಸಿದ್ದು, ಈ ವೇಳೆ ಎರಡೂ ಕಾರಿನಲ್ಲಿದ್ದವರು ಮಾತಿನ ಚಕಮಕಿ ನಡೆಸುತ್ತಿದ್ದ ಹೊತ್ತಿನಲ್ಲಿ ಸಾರ್ವಜನಿಕರೂ ಗುಂಪುಗೂಡಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ವಿಟ್ಲ ಪೊಲೀಸರು ಲಘು ಲಾಠಿ ಪ್ರಹಾರವನ್ನೇ ಮಾಡಬೇಕಾಯಿತು.

ಕಲ್ಲಡ್ಕ ಕಡೆಯಿಂದ ಮಾಣಿಗೆ ತೆರಳುತ್ತಿದ್ದ ಇನ್ನೋವಾ ವಾಹನ ಮತ್ತು ಕಲ್ಲಡ್ಕ ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ಸಂದರ್ಭ ಉಭಯ ವಾಹನಗಳಲ್ಲಿ ಸಂಚರಿಸುವವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆ ವೇಳೆ ಸಾರ್ವಜನಿಕರೂ ಜತೆ ಸೇರಿ ಪರಿಸ್ಥಿತಿ ಕೈಮೀರುವ ಹಂತಕ್ಕೆ ಬಂತು. ಎರಡೂ ಕಾರಿನಲ್ಲಿದ್ದವರು ಪರಸ್ಪರ ಭಿನ್ನ ಕೋಮಿಗೆ ಸೇರಿದವರು ಎಂಬ ವಿಚಾರ ಹರಡಿ, ವಿಷಯ ಗಂಭೀರಕ್ಕೆ ತೆರಳುವ ಹೊತ್ತಿನಲ್ಲೇ ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿದರು.

Edited By :
Kshetra Samachara

Kshetra Samachara

12/11/2021 08:32 pm

Cinque Terre

11.46 K

Cinque Terre

0

ಸಂಬಂಧಿತ ಸುದ್ದಿ