ಮುಲ್ಕಿ: ಮುಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಚರಂತಿಪೇಟೆ ಬಳಿ ಸ್ಕೂಟರ್ ಸ್ಕಿಡ್ ಆಗಿ ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ಯುವಕನನ್ನು ಮುಲ್ಕಿ ಮಟ್ಟು ನಿವಾಸಿ ಸಂತೋಷ್ ಅಂಚನ್(30) ಎಂದು ಗುರುತಿಸಲಾಗಿದೆ.
ಗಾಯಾಳು ಯುವಕ ಸಂತೋಷ್ ಕಾರ್ನಾಡಿನಿಂದ ಮುಲ್ಕಿ ಕಡೆಗೆ ಸ್ಕೂಟರ್ ನಲ್ಲಿ ಬರುತ್ತಿದ್ದು, ಚರಂತಿಪೇಟೆ ಬಳಿ ಆಕಸ್ಮಿಕವಾಗಿ ಸ್ಕೂಟರ್ ಸ್ಕಿಡ್ ಆಗಿದೆ. ಅಪಘಾತದಿಂದ ಸಂತೋಷ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಸ್ಥಳದಲ್ಲಿದ್ದ ರಿಕ್ಷಾ ಚಾಲಕ ಪೊಳಲಿ ನಿವಾಸಿ ಉಮ್ಮರ್ ಫಾರೂಕ್, ಮುಲ್ಕಿ ಆಟೋ ಚಾಲಕ ಪುಷ್ಪರಾಜ್ ಮತ್ತಿತರರು ಗಾಯಾಳುವನ್ನು ಮುಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.
ಗಾಯಾಳು ಸಂತೋಷ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮುಲ್ಕಿ ನಪಂ ಸದಸ್ಯ ಪುತ್ತುಬಾವ, ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
05/11/2021 07:19 pm