ಮಂಗಳೂರು: ಕ್ಯಾಂಪ್ಕೋ ಚಾಕೋಲೆಟ್ ಕಂಪೆನಿಯ ಮಾರ್ಕೆಟಿಂಗ್ ಮ್ಯಾನೇಜರ್ ಇಂದು ರಸ್ತೆ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ನಗರದ ಪಡೀಲ್ ನಲ್ಲಿ ನಡೆದಿದೆ. ಯುವ ಮಾರ್ಕೆಟಿಂಗ್ ಮ್ಯಾನೇಜರ್ ವಿದ್ಯಾ ಕಣ್ವತೀರ್ಥ ಮೃತಪಟ್ಟ ಮಹಿಳೆ.
ವಿದ್ಯಾ ಅವರು ಇಂದು ಮಂಗಳೂರಿನ ಪಡೀಲ್‌ನಲ್ಲಿ ತಮ್ಮ ಆಕ್ಟಿವಾದಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಲಾರಿಯೊಂದು ಅವರ ಆ್ಯಕ್ಟಿವಾಕ್ಕೆ ಡಿಕ್ಕಿಯಾಗಿದೆ. ಪರಿಣಾಮ ರಸ್ತೆಗೆ ಬಿದ್ದ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಅವರನ್ನು ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
30/10/2021 08:18 pm