ಬಜಪೆ : ಬಜಪೆ - ಕೈಕಂಬ ರಾಜ್ಯ ಹೆದ್ದಾರಿಯ ಕಜೆಪದವು ಅಯ್ಯಪ್ಪ ಮಂದಿರದ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಮರಿಗೆ ಉರುಳಿ ಬಿದ್ದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಕಾರು ಬಹುತೇಕ ನಜ್ಜು ಗುಜ್ಜಾಗಿದ್ದು,ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಜೆಪದವು ಸಮೀಪದ ರಸ್ತೆಯು ತೀರಾ ತಿರುವಿನಿಂದ ಕೂಡಿದ ರಸ್ತೆಯಾಗಿದ್ದು,ಸಣ್ಣಪುಟ್ಟ ಅವಘಡಗಳು ಈ ಹಿಂದೆ ಕೂಡ ನಡೆದಿತ್ತು.ಕಾರು ಬಿದ್ದ ಸಮೀಪದಲ್ಲೇ ಪಾಳು ಬಾವಿಯೊಂದು ಇದ್ದು,ಕಳೆದ ಬಾರಿ ಕಾರೊಂದು ಪಾಳು ಬಾವಿಗೆ ಬಿದ್ದು ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರಾದ ಘಟನೆ ನಡೆದಿತ್ತು.
Kshetra Samachara
11/10/2021 12:22 pm