ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಡು ಹಂದಿ ದಾಳಿಗೆ ವಯೋವೃದ್ಧೆ ಸಾವು !

ಕೋಟ: ಕೋಟ, ವಡ್ಡರ್ಸೆ ಗ್ರಾ.ಪಂ ವ್ಯಾಪ್ತಿಯ ಕುದ್ರುಮನೆಬೆಟ್ಟು ಎಂಬಲ್ಲಿ ಕಾಡು ಹಂದಿ ದಾಳಿಗೆ ವಯೋವೃದ್ಧೆಯೊಬ್ಬರು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಕಮಲಾ ದೇವಾಡಿಗ (80) ಹಂದಿ ದಾಳಿಯಿಂದ ಮೃತಪಟ್ಟ ನತದೃಷ್ಟೆಯಾಗಿದ್ದಾರೆ. ಇವರು ಭತ್ತದ ಗದ್ದೆ ನೋಡಲು ತೆರಳುತ್ತಿದ್ದ ವೇಳೆ ಕಾಡು ಹಂದಿ ದಾಳಿ ಮಾಡಿತ್ತು.ಹಂದಿ ದಾಳಿಯಿಂದ ವಯೋವೃದ್ಧೆಯ ದೇಹದ ಬಹುತೇಕ ಮೂಳೆ ಮುರಿತಗೊಂಡಿತ್ತು.

ತಕ್ಷಣ ಕಮಲಾ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಅವರು ಮೃತಪಟ್ಟಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

07/10/2021 01:45 pm

Cinque Terre

11.73 K

Cinque Terre

2