ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಉದ್ಯಾನವನದ ಮರಕ್ಕೆ ನೇಣುಬಿಗಿದು ಯುವಕ ಆತ್ಮಹತ್ಯೆ!

ಉಡುಪಿ; ಅಜ್ಜರಕಾಡು ಉದ್ಯಾನವನದ ಹುತಾತ್ಮರ ಸೈನಿಕರ ಸ್ಮಾರಕದ ಹಿಂಭಾಗದಲ್ಲಿರುವ ಮರಕ್ಕೆ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತನ ವ್ಯಕ್ತಿ ಭೋಜ ನಾಯಕ್ ಎಂಬವರ ಪುತ್ರ ಸಂತೋಷ ಎಚ್.ಬಿ (33) ಎಂದು ಗುರುತಿಸಲಾಗಿದೆ. ಈತ ಶೃಂಗೇರಿಯವನಾಗಿದ್ದು ,ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಡಲಾಗಿದೆ. ಶವ ತೆರವುಗೊಳಿಸಲು ಯುವಜನ ಸೇವಾ ಕ್ರೀಡಾಧಿಕಾರಿ ರೋಶನ್ ಕುಮಾರ್ ಶೆಟ್ಟಿ, ಅನಿಲ್, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ಸಹಕರಿಸಿದರು. ಸಂಬಂಧಿಕರು ತುರ್ತಾಗಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Edited By : Nagesh Gaonkar
Kshetra Samachara

Kshetra Samachara

30/09/2021 07:27 pm

Cinque Terre

27.98 K

Cinque Terre

0