ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಸಮಿಪದ ಕ್ಷೀರಸಾಗರದ ಬಳಿ ಯಲ್ಲಿ ಕಾರು ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ್ದರೆ ಕಾರಿನಲ್ಲಿದ್ದ ಇಬ್ಬರು ಅಲ್ಪಸ್ವಲ್ಪ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತ ಯುವಕನನ್ನು ಪಕ್ಷಿಕೆರೆ ಪಂಜ ನಿವಾಸಿ ರಘುನಾಥ್ ಪೂಜಾರಿ (40) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮುಲ್ಕಿ ಸಮೀಪದ ಮಟ್ಟು ನಿವಾಸಿ ಹಿಮಕರ ಮತ್ತು ಕಾರ್ತಿಕ್ (ಕೇಶವ ಪಂಜ) ಎಂದು ಗುರುತಿಸಲಾಗಿದೆ
ಮೃತ ರಘುನಾಥ್ ತನ್ನ ಮಿತ್ರರಾದ ಹಿಮಕರ ಮಟ್ಟು, ಮತ್ತು ಕೆಮ್ರಾಲ್ ಗ್ರಾಪಂ ಸದಸ್ಯ ಕಾರ್ತಿಕ್(ಕೇಶವ ಪಂಜ) ರವರೊಂದಿಗೆ ಕಾರಿನಲ್ಲಿ ಮುಲ್ಕಿಯಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದಾಗ ಕ್ಷೀರಸಾಗರ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ನಡುವೆ ಏಕಾಏಕಿ ಬೈಕ್ ಕ್ರಾಸ್ ಮಾಡುತ್ತಿದ್ದ ವೇಳೆಯಲ್ಲಿ ಅಪಘಾತ ತಪ್ಪಿಸಲು ಯತ್ನಿಸಿದಾಗ ಕಾರಿನ ಚಾಲಕ ಬ್ರೇಕ್ ಹಾಕಿದ್ದು ಸಂದರ್ಭ ಕಾರು ಡಿವೈಡರ್ ಮೇಲೇರಿ ಮಂಗಳೂರಿನಿಂದ ಉಡುಪಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿ ಬಿದ್ದಿದೆ.
ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಕಾರಿನ ಎದುರಿನಲ್ಲಿ ಕುಳಿತಿದ್ದ ರಘುನಾಥ್ ಗೆ ರಸ್ತೆ ಬದಿ ಅಪ್ಪಳಿಸಿ ಸ್ಥಳದಲ್ಲಿ ಮತಪಟ್ಟಿದ್ದಾರೆ. ಉಳಿದಂತೆ
ಅಪಘಾತದಲ್ಲಿ ಚಾಲಕ ಕಾರ್ತಿಕ್ ಹಾಗೂ ಹಿಮಕರ ಮಟ್ಟು ಸಹಿತ ಇಬ್ಬರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾರೆ.
ಅಪಘಾತದಿಂದ ಹೆದ್ದಾರಿಯಲ್ಲಿ ರಕ್ತದೋಕುಳಿ ಹರಿದಿದ್ದು ಮೃತನ ರಘುನಾಥ ಪೂಜಾರಿ ತಲೆ ಚಿಪ್ಪರ್ ಚೂರಾಗಿದೆ. ಮೃತ ರಘುನಾಥ ಪೂಜಾರಿ ಪಕ್ಷಿಕೆರೆ ಪರಿಸರದಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು ಎಲ್ಲರೊಂದಿಗೆ ಉತ್ತಮವಾದ ಒಡನಾಟ ಹೊಂದಿದ್ದ.
ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ ಕೆಲಹೊತ್ತು ವ್ಯತ್ಯಯವುಂಟಾಗಿದ್ದು ಸುರತ್ಕಲ್ ಟ್ರಾಫಿಕ್ ಇನ್ಸ್ಪೆಕ್ಟರ್ ಶರೀಫ್, ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಪಘಾತದ ವಾಹನವನ್ನು ತೆರವುಗೊಳಿಸಿದ್ದಾರೆ.
Kshetra Samachara
27/09/2021 06:38 pm