ಕಾರ್ಕಳ: ವೃದ್ಧರೊಬ್ಬರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು ,ಪರಿಣಾಮವಾಗಿ ವೃದ್ಧರು ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಎಂಬಲ್ಲಿ ನಡೆದಿದೆ. ಸಾಧು ಪೂಜಾರಿ(80) ಮೃತಪಟ್ಟ ನತದೃಷ್ಟ ವ್ಯಕ್ತಿಯಾಗಿದ್ದಾರೆ. ಮೃತ ಸಾಧು ಪೂಜಾರಿ ಅವರು ಬಹಳ ವರ್ಷಗಳಿಂದ ಮನೆಗೆ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ಹಿರ್ಗಾನ ಮೂಜೂರು ಪರಿಸರದ ಅಂಗಡಿ ಬದಿಯಲ್ಲಿ ರಾತ್ರಿ ಮಲಗುತ್ತಿದ್ದರು.
ರಾತ್ರಿ ವೇಳೆಗೆ ಬೀದಿ ನಾಯಿಗಳು ಅವರ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ. ಇದರಿಂದ ವಿಪರೀತ ರಕ್ತಸ್ರಾವವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Kshetra Samachara
23/09/2021 01:05 pm