ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಡಪದವು : ಕಣಜದ ಹುಳುಗಳ ದಾಳಿಗೆ ಯುವಕ ದಾರುಣ ಸಾವು

ಬಜಪೆ : ಕಣಜದ ಹುಳು(ಪಿಲಿ ಕುಂಡೆಲ್ )ಗಳ ದಾಳಿಗೆ ತೀವ್ರವಾಗಿ ಗಾಯಗೊಂಡು ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಎಡಪದವಿನಲ್ಲಿ ಇಂದು ನಡೆದಿದೆ.ದಾರುಣವಾಗಿ ಸಾವನ್ನಪ್ಪಿದ ಯುವಕನನ್ನು ಎಡಪದವಿನ ಪಟ್ಲಚ್ಚಿಲ್‍ನ ನಿವಾಸಿ ಕೇಶವ (24) ಎಂದು ಗುರುತಿಸಲಾಗಿದೆ.ಇವರು ಎಂಸಿಎಫ್ ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು.

ಇತ್ತೀಚಿಗಷ್ಟೆ ಮನೆಯ ತೆಂಗಿನ ಮರಗಳ ಕಾಯಿಗಳನ್ನು ಕೀಳಲು ಹೊಸದಾಗಿ ಯಂತ್ರವನ್ನು ಖರೀದಿಸಿದ್ದರು. ಭಾನುವಾರದಂದು ನೆರೆಮನೆಯವರ ತೆಂಗಿನ ಮರದಿಂದ ತೆಂಗಿನಕಾಯಿ ಕೀಳಲು ಹೊಸ ಯಂತ್ರದ ಮೂಲಕ ಮರವೇರಿದ್ದರು.ಈ ಸಂದರ್ಭದಲ್ಲಿ ಮರದಲ್ಲಿ ಗೂಡು ಕಟ್ಟಿದ್ದ ಕಣದ ಹುಳುವಿನ ಗೂಡಿಗೆ ಕೇಶವರ ತಲೆ ತಾಗಿದ್ದು, ಏಕಾಏಕಿಯಾಗಿ ಹುಳುಗಳು ದಾಳಿ ಮಾಡಿವೆ. ಹುಳುಗಳ ದಾಳಿಗೆ ಅವರ ಮೈಮೇಲೆ ಸುಮಾರು 70ಕ್ಕೂ ಹೆಚ್ಚು ಕಡೆ ಗಾಯಗಳಾಗಿದ್ದು,ತಕ್ಷಣ ಮೂಡಬಿದಿರೆಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕೇಶವ ಅವರು ಇಂದು ಕೊನೆಯುಸಿರೆಳೆದರು. ಮೃತರು ತಂದೆ,ತಾಯಿ ಮೂವರು ಸಹೋದರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

22/09/2021 07:06 pm

Cinque Terre

12.46 K

Cinque Terre

6

ಸಂಬಂಧಿತ ಸುದ್ದಿ