ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಮಾಬುಕಳ ಸೇತುವೆ ಬಳಿ ಆಂಬುಲೆನ್ಸ್ ಒಂದರ ಟೈರ್ ಸ್ಪೋಟಗೊಂಡು ಭಾರೀ ಅನಾಹುತವಾಗುವುದು ಸ್ವಲ್ಪದರಲ್ಲೇ ತಪ್ಪಿದ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯಿಂದ ಅನಾರೋಗ್ಯ ಪೀಡಿತ ಮಗುವನ್ನು ಕರೆತರುತ್ತಿದ್ದ ಅಂಬುಲೆನ್ಸ್ ನ ಟೈಯರ್ ಸ್ಪೋಟಗೊಂಡು ಡಿವೈಡರ್ ಮೇಲೆ ಹತ್ತಿದೆ. ಸೇತುವೆಯ ಆವರಣ ಗೋಡೆಗೆ ಡಿಕ್ಕಿಯಾಗಿದ್ದರಿಂದ ಆಂಬುಲೆನ್ಸ್ ಅಲ್ಲೇ ನಿಂತಿದ್ದು ನದಿಗೆ ಉರುಳುವುದರಿಂದ ಸ್ವಲ್ಪದರಲ್ಲೇ ಪಾರಾಗಿದೆ.
ಆಂಬುಲೆನ್ಸ್ ನಲ್ಲಿ ಮಗುವನ್ನು ಕರೆದೊಯ್ಯುತ್ತಿದ್ದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಬೇರೆ ಅನಾಹುತ ಆಗುವುದು ತಪ್ಪಿದೆ.
ಸ್ಥಳಕ್ಕೆ ಕೋಟ ಪೊಲೀಸರು ಆಗಮಿಸಿದರು.ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
Kshetra Samachara
16/09/2021 11:15 am