ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ನದಿ ನೀರಿಗೆ ಬಿದ್ದು ತಾಯಿ ಮಗ ಸಾವು !

ಬೈಂದೂರು:ನದಿಗೆ ಬಿದ್ದು ತಾಯಿ‌ ಮತ್ತು ಮಗ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದದಲ್ಲಿ ಇಂದು ನಡೆದಿದೆ.

ಮಗ ಶಾನ್‌ (11) ಮತ್ತು ತಾಯಿ ರೊಸಾರಿಯಾ(35) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ನತದೃಷ್ಟರು.

ನದಿ ಪಕ್ಕದಲ್ಲಿ ಹೋಗುತ್ತಿದ್ದಾಗ ಹನ್ನೊಂದರ ಬಾಲಕ ಶಾನ್ ನೀರಿಗೆ ಬಿದ್ದಿದ್ದಾನೆ.ಮಗನನ್ನು ರಕ್ಷಿಸಲು ಹೋದಾಗ ತಾಯಿ ಕೂಡ ನದಿ ನೀರಲ್ಲಿ ಕೊಚ್ಚಿಹೋಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಹುಡುಕಾಟದ ಬಳಿಕ ಶಾನ್‌ ಮೃತದೇಹ ಪತ್ತೆಯಾಗಿದ್ದು, ದೋಣಿ ಬಳಸಿ ಮಹಿಳೆ ಮೃತದೇಹವನ್ನು ಅಗ್ನಿಶಾಮಕ ದಳದವರು ಪತ್ತೆ ಮಾಡಿದ್ದಾರೆ.

ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಾವುಂದದ ನೋಯೆಲ್ ಚುಂಗಿಗುಡ್ಡೆ ಎಂಬವರ ಕುಟುಂಬ ಇದಾಗಿದೆ.ನಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

Edited By : Nagesh Gaonkar
Kshetra Samachara

Kshetra Samachara

11/09/2021 05:29 pm

Cinque Terre

20.79 K

Cinque Terre

1

ಸಂಬಂಧಿತ ಸುದ್ದಿ