ಉಪ್ಪಿನಂಗಡಿಯ ಕೆಮ್ಮಾರ ಮಸೀದಿ ಬಳಿಯ ಸೇತುವೆಯಲ್ಲಿ ಯುವಕನೊಬ್ಬ ನೀರುಪಾಲಾದ ಘಟನೆ ನಡೆದಿದೆ. ಕೆಮ್ಮಾರ ಮಸೀದಿ ಬಳಿಯ ನಿವಾಸಿ ಇಸ್ಮಾಯಿಲ್ ಎಂಬವರ ಮಗ ಶಫೀಕ್ (19) ಎಂಬ ಯುವಕ ನೀರುಪಾಲಾಗಿದ್ದು, ಹಳೇ ಸೇತುವೆಯಲ್ಲಿ ಸ್ಲಿಪ್ ಆಗಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ತನಿಖೆಯ ಬಳಿಕ ತಿಳಿದು ಬರಬೇಕಾಗಿದೆ. ಇನ್ನು ಮೃತದೇಹಕ್ಕಾಗಿ ಹುಡುಕಾಟ ಮುಂದುವರಿಸಲಾಗಿದ್ದು, ಸ್ಧಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಮೃತದೇಹದ ಹುಡುಕಾಟ ನಡೆಸುತ್ತಿದ್ದಾರೆ.
Kshetra Samachara
01/09/2021 06:34 pm