ಹಳೆಯಂಗಡಿ: ಪಾವಂಜೆ ಬಳಿ ಗದ್ದೆಗೆ ಹಾರಿದ ಕಾರು ಚಾಲಕ ಪಾರು

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಹಳೆ ದಾಬಾ ಬಳಿ ಮಂಗಳೂರಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಹಾರಿದ್ದು ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡಸದೃಶ ಪಾರಾಗಿದ್ದಾನೆ.

ಚಾಲಕನನ್ನು ಲೋರೆಟ್ಟೋ ಪದವು ನಿವಾಸಿ ಕಲಂದರ್ ಶಾಫಿ ಎಂದು ಗುರುತಿಸಲಾಗಿದೆ.

ಕಾರು ಮಂಗಳೂರಿನಿಂದ ಉಡುಪಿಗೆ ಸಂಚರಿಸುತ್ತಿದ್ದ ವೇಳೆಯಲ್ಲಿ ಎದುರಿನ ವಾಹನ ಅಡ್ಡ ಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಎನ್ನಲಾಗಿದೆ.

ಈ ಸಂದರ್ಭ ಕಾರು ಗದ್ದೆಗೆ ಬಿದ್ದಿದ್ದು ಚಾಲಕ ಪವಾಡಸದೃಶ ಪಾರಾಗಿದ್ದಾನೆ.ಹಳೆಯಂಗಡಿ ಯಿಂದ ಪಾವಂಜೆ ಸೇತುವೆ ಯವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಗೊಂಡ ವೇಳೆಯಲ್ಲಿ ಸರ್ವಿಸ್ ರಸ್ತೆಯಿಲ್ಲದ ಕಾರಣ ಹೆದ್ದಾರಿ ಬದಿಯಲ್ಲಿ ಕಬ್ಬಿಣದ ತಡೆಬೇಲಿ ಇಲ್ಲದೆ ಅಪಾಯಕಾರಿಯಾಗಿ ಪರಿಣಮಿಸಿದೆ.

ರಾತ್ರಿ ಹೊತ್ತು ಹೆದ್ದಾರಿಯಲ್ಲಿ ದಾರಿ ದೀಪ ಅವ್ಯವಸ್ಥೆ ವಾಹನ ಚಾಲಕರಿಗೆ ಮತ್ತಷ್ಟು ಕಂಟಕ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕ್ರೇನ್ ಮೂಲಕ ವಾಹನ ತೆರವುಗೊಳಿಸಲಾಗಿದೆ.

Kshetra Samachara

Kshetra Samachara

2 months ago

Cinque Terre

11.27 K

Cinque Terre

3

 • kasim
  kasim

  B.R.NAYAK, 😀😀😀😀😀

 • ನಾನು
  ನಾನು

  warning signs illa si

 • B.R.NAYAK
  B.R.NAYAK

  "" ಗದ್ದೆಗೆ ಹಾರಿದ ಕಾರು... ಚಾಲಕ ಪಾರು "" ಹಿಂದಿನ ಜನ್ಮದಲ್ಲಿ ಈ ಕಾರು ಟ್ರಾಕ್ಟರ್,ಟ್ರಿಲ್ಲಾರ್ ಆಗಿ,ಗದ್ದೆ ಉಳುಮೆ ಮಾಡುತಿ ತ್ತೋ. ಏನೋ ? ಗದ್ದೆ ಕಂಡಾಗ ,ಹಿಂದಿನ ನೆನಪು ಮರುಕಳಿಸಿ ರ ಬಹುದು .