ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೊಲ್ನಾಡು ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಮಧ್ಯಾಹ್ನ ಟಿಪ್ಪರ್ ಮತ್ತು ಕಾರು ನಡುವೆ ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ಐವರು ಪವಾಡಸದೃಶವಾಗಿ ಪಾರಾಗಿದ್ದಾರೆ.
ಕೊಲ್ಲೂರಿನಿಂದ ಕೇರಳದ ಪಯ್ಯನ್ನೂರಿನತ್ತ ತೆರಳುತ್ತಿದ್ದ ಕಾರು, ಕೊಲ್ನಾಡು ತಲುಪುತ್ತಿದ್ದಂತೆಯೇ ಎದುರಿನಲ್ಲಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಯತ್ನದಲ್ಲಿದ್ದಾಗ ಹಿಂದಿನಿಂದ ಟಿಪ್ಪರ್ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಕಾರು ಸಿನಿಮೀಯ ಮಾದರಿಯಲ್ಲಿ ಒಂದು ಸುತ್ತು ತಿರುಗಿದ್ದು, ಕಾರಿನ ಎದುರು ಭಾಗ ಜಖಂಗೊಂಡಿದೆ. ಈ ಸಂದರ್ಭ ಕಾರಿನಲ್ಲಿ ಚಾಲಕ ಸಹಿತ ಐದು ಮಂದಿ ಇದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ಅಪಘಾತದಿಂದಾಗಿ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುರತ್ಕಲ್ ಟ್ರಾಫಿಕ್ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.
Kshetra Samachara
05/02/2021 03:00 pm