ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿಯ ಬಾರ್ ಎದುರುಗಡೆ ಆಟೋರಿಕ್ಷಾ ಚಾಲಕನೊಬ್ಬ ಮದ್ಯದ ಅಮಲಿನಲ್ಲಿ ಪಾರ್ಕಿಂಗ್ ಸ್ಥಳದಲ್ಲಿದ್ದ ಸ್ಕೂಟರ್ ಮೇಲೆಯೇ ತನ್ನ ಗಾಡಿ ಚಲಾಯಿಸಿದ್ದು, ಸ್ಕೂಟರ್ ಜಖಂಗೊಂಡಿದೆ.
ಪಡುಪಣಂಬೂರು ನಿವಾಸಿಯಾಗಿರುವ ಈ ಆಟೋರಿಕ್ಷಾ ಚಾಲಕ ಕಂಠಪೂರ್ತಿ ಮದ್ಯ ಸೇವಿಸಿ, ತೂರಾಡುತ್ತಾ ಬಂದು ಏಕಾಏಕಿ ಆಟೋ ಚಲಾಯಿಸಿದ್ದಾನೆ.
ಈ ಸಂದರ್ಭ ಎದುರಿನಲ್ಲಿದ್ದ ಸ್ಕೂಟರ್ ಗೆ ಆಟೋ ಡಿಕ್ಕಿ ಹೊಡೆದು ಸ್ಕೂಟರ್ ನೆಲಕ್ಕುರುಳಿ ಹಾನಿಗೊಂಡಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಿಕ್ಷಾ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಪಘಾತಕ್ಕೀಡಾದ ಸ್ಕೂಟರ್ ಸವಾರ ಹಳೆಯಂಗಡಿ ಲೈಟ್ ಹೌಸ್ ಬಳಿಯ ನಿವಾಸಿ ವಿಶ್ವನಾಥ ಮತ್ತು ಮದ್ಯಪಾನಿ ರಿಕ್ಷಾ ಚಾಲಕನ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು.
Kshetra Samachara
29/01/2021 08:57 pm