ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನ ಶವ ಪತ್ತೆ; ಆತ್ಮಹತ್ಯೆ ಶಂಕೆ

ಮಣಿಪಾಲ: ಅಪರಿಚಿತ ಯುವಕನ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಇಂದ್ರಾಣಿ ರೈಲು ನಿಲ್ದಾಣದ ಸನಿಹ ರವಿವಾರ ಕಂಡುಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತರ ಬಳಿ ಗುರುತುಚೀಟಿ ಪತ್ತೆಯಾಗಿದ್ದು ಅದರಲ್ಲಿ ಗಿರೀಶ್ ಪರಿಕಾಂತ್ರ (23), ತಂದೆ ಯಶವಂತ ಪರಿಕಾಂತ್ರ, ಕಾರವಾರ ಎಂದು ವಿಳಾಸ ಇರುವುದು ಕಂಡುಬಂದಿದೆ. ಶವವನ್ನು ಕೆ.ಎಂ.ಸಿ. ಆಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವ ಸಾಗಾಟಕ್ಕೆ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

10/01/2021 02:59 pm

Cinque Terre

30.96 K

Cinque Terre

0

ಸಂಬಂಧಿತ ಸುದ್ದಿ