ಮಲ್ಪೆ ಸಮುದ್ರದಲ್ಲಿ‌ ಪರ್ಸೀನ್ ಬೋಟ್ ಮುಳುಗಡೆ: ತುಂಡಾದ ಸ್ಟೇರಿಂಗ್, ಎಲ್ಲ ಮೀನುಗಾರರ ರಕ್ಷಣೆ

ಮಲ್ಪೆ: ಮಲ್ಪೆ ಸಮುದ್ರದಲ್ಲಿ‌ ಮತ್ತೊಂದು ಬೋಟ್ ಅವಘಡ ಸಂಭವಿಸಿದೆ.

ಮಂಗಳವಾರ ಬೆಳಗ್ಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ, ರಾತ್ರಿ ಮೀನುಗಾರಿಕೆ ಮುಗಿಸಿ ಮರಳುತ್ತಿದ್ದ ಸಂದರ್ಭ ಪರ್ಸೀನ್ ಬೋಟ್ ಮುಳುಗಿದ್ದು, ಅದರಲ್ಲಿದ್ದ ಮೀನುಗಾರರೆಲ್ಲರನ್ನೂ ರಕ್ಷಿಸಲಾಗಿದೆ.

ಸೈಂಟ್ ಮೇರಿಸ್ ದ್ವೀಪದ ಬಳಿ ಬೋಟ್ ನ ಸ್ಟೇರಿಂಗ್ ಕಟ್ ಆಗಿ ನಿಯಂತ್ರಣ ತಪ್ಪಿ ಬಂಡೆಗೆ ಗುದ್ದಿದ ಕಾರಣ ಈ ಅವಘಡ ಸಂಭವಿಸಿದೆ.
ಮುಳುಗಿದ ಬೋಟ್ ನಲ್ಲಿದ್ದ ಎಲ್ಲ ಮೀನುಗಾರರನ್ನು ಸಮೀಪದಲ್ಲಿದ್ದ ಇತರ ಬೋಟ್ ನವರು ರಕ್ಷಿಸಿದ್ದಾರೆ.

ಶ್ರೀಕಾಂತ್ ಪುತ್ರನ್ ಎಂಬವರಿಗೆ ಸೇರಿದ 'ಹನುಮಂತ ತೀರ್ಥ ' ಎಂಬ ಹೆಸರಿನ ಬೋಟ್ ಇದಾಗಿದೆ. ಬೋಟ್ ಮುಳುಗಿ ಅಂದಾಜು 20 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.

Kshetra Samachara

Kshetra Samachara

11 days ago

Cinque Terre

19.77 K

Cinque Terre

0