ಸಮೀಪದ ಕೊಲ್ನಾಡು ಕೈಗಾರಿಕಾ ಪ್ರದೇಶದ ಪ್ರಮುಖ ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಟೆಂಪೋ ಡಿಕ್ಕಿಯಾಗಿ ಚಾಲಕ ಸಾವನ್ನಪ್ಪಿದ್ದು, ಟೆಂಪೋದಲ್ಲಿದ್ದ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತ ಚಾಲಕನನ್ನು ಕೆಎಸ್ ರಾವ್ ನಗರ ಲಿಂಗಪ್ಪಯ್ಯಕಾಡು ವಿಜಯಪುರ ಕಾಲೋನಿ ನಿವಾಸಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಶವಂತ ರಾಯ (43) ಹಾಗೂ ಗಾಯಾಳುಗಳನ್ನು ಭಗವಂತ ರಾಯ (60), ಕುಮಾರ (45) ಎಂದು ಗುರುತಿಸಲಾಗಿದೆ.
ಲಿಂಗಪ್ಪಯ್ಶ ಕಾಡು ಕಾಲೊನಿಯಿಂದ ಕೂಲಿ ಕೆಲಸಕ್ಕೆ ಬೆಳ್ಳಂಬೆಳಗ್ಗೆ ಟೆಂಪೋದಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಕೊಲ್ನಾಡು ಕೈಗಾರಿಕಾ ಪ್ರದೇಶದ ಪ್ರಮುಖ ರಸ್ತೆಯಲ್ಲಿ ಟೆಂಪೋ, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು ಚಾಲಕ ಹಾಗೂ ಟೆಂಪೋದಲ್ಲಿದ್ದ ಇಬ್ಬರೂ ಕೂಲಿ ಕಾರ್ಮಿಕರು ಟೆಂಪೋದ ಒಳಗೆ ಸಿಲುಕಿಕೊಂಡು ಒದ್ದಾಡುತ್ತಿದ್ದ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂದರ್ಭ ಟೆಂಪೋ ಚಾಲಕ ಯಶವಂತರಾಯ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ. ಮೃತ ಯಶವಂತ ರಾಯ ಚಾಲಕ ವೃತ್ತಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಸ್ಥಳಕ್ಕೆ ಮುಲ್ಕಿ ನಪಂ ಸದಸ್ಯ ಮಂಜುನಾಥ ಕಂಬಾರ, ಮಾಜಿ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ಭೀಮಶಂಕರ್, ಶಿವಾನಂದ ಆರ್ ಕೆ ಹಾಗೂ ಟ್ರಾಫಿಕ್ ಪೊಲೀಸ್ ಕಾಂತಪ್ಪ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಾಗಿದೆ.
PublicNext
29/06/2022 12:30 pm