ಮುಲ್ಕಿ: ಮಂಗಳೂರಿನ ಹೊರವಲಯದ ಕೂಳೂರಿನಲ್ಲಿ ಶೌಚಾಲಯದ ಗುಂಡಿ ತೆಗೆಯುತ್ತಿದ್ದ ಸಂದರ್ಭ ಕಂಪೌಂಡ್ ಕುಸಿದು ಮಣ್ಣಿನಡಿ ಸಿಲುಕಿ ರಾಜೇಶ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಸಂದರ್ಭ ಶರೀರವನ್ನು ಮಣ್ಣಿನಡಿ ತೆಗೆಯುತ್ತಿರುವಾಗ ಪರಿಹಾರ ಕಾರ್ಯದಲ್ಲಿ ಮಾಜಿ ಶಾಸಕ ಮೊಯಿದ್ದೀನ್ ಬಾವ ಕೂಡ ಭಾಗಿಯಾಗಿ ಮಾರ್ಗದರ್ಶನ ನೀಡಿದ್ದರು.
ಇಂದು ಮೃತ ರಾಜೇಶ್ ಮನೆಗೆ ಅವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸರಕಾರದ ವತಿಯಿಂದ ಮೃತನ ಕುಟುಂಬಕ್ಕೆ ಈಗಾಗಲೇ 5 ಲಕ್ಷ ರೂ. ಪರಿಹಾರ ಘೋಷಿಸಿದ್ದು, 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಮೊಯಿದ್ದೀನ್ ಬಾವ ಈ ಸಂದರ್ಭ ಸರಕಾರವನ್ನು ಒತ್ತಾಯಿಸಿದರು.
Kshetra Samachara
21/09/2020 08:29 am