ಸಿದ್ದಾಪುರ: ಇಂದು ಬೆಳ್ಳಂಬೆಳಗ್ಗೆ ಶಿವಮೊಗ್ಗದಿಂದ ಕುಂದಾಪುರ ಮಾರ್ಗವಾಗಿ ಬರುತ್ತಿದ್ದ ಲಾರಿ ಆಯತಪ್ಪಿ ಧರೆಗೆ ಉರುಳಿದೆ, ನಸುಕಿನ ಜಾವ ಬಾಳೆಬರೆ ಘಾಟಿಯ ಮೂಲಕ ದೇವಸ್ಥಾನದ ಸಮೀಪ ತಿರುವಿನಲ್ಲಿ ಲಾರಿ, ಬ್ರೇಕ್ ಫೇಲ್ ಆಗಿ ಘಾಟಿಯ ಕೆಳಕ್ಕೆ ಹಾರಿದೆ, ಅದೃಷ್ಟವಶಾತ್ ಬೃಹತಾಕಾರದ ಮರಕ್ಕೆ ವಾಹನ ಸಿಲುಕಿಕೊಂಡಿರುವುದರಿಂದ ದೊಡ್ಡ ದುರಂತ ತಪ್ಪಿದೆ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಈ ಲಾರಿ ಯಾರದ್ದು, ಎಲ್ಲಿದ್ದು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.
Kshetra Samachara
30/09/2020 10:35 am