ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ - ಉಡುಪಿ ನಗರದ ರಾಯಲ್ ಮಹಲ್‌ ಕುಸಿತ

ಉಡುಪಿ: ಬಹುಮಹಡಿ ಕಟ್ಟಡವೊಂದರ ಪಾರ್ಶ್ವ ಕುಸಿತಗೊಂಡ ಘಟನೆ ಉಡುಪಿ ನಗರದಲ್ಲಿ ನಡೆದಿದೆ.

ಉಡುಪಿ ನಗರದ ಚಿತ್ತರಂಜನ್ ಸರ್ಕಲ್ ಸಮೀಪದ ರಾಯಲ್ ಮಹಲ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಜನ ಔಷಧಿ ಕೇಂದ್ರ, ಹೋಟೆಲ್, ಬೇಕರಿ ಸೇರಿದಂತೆ ಐದಾರು ಅಂಗಡಿಗಳು ಈ ಕಟ್ಟಡದಲ್ಲಿದ್ದವು.

ಈ ಕಟ್ಟಡದ ಒಂದು ಭಾಗ ಕುಸಿಯುತ್ತಿದ್ದಂತೆಯೇ ತಳಮಹಡಿಯಲ್ಲಿದ್ದ ಸಿಬ್ಬಂದಿ ಹೊರಗೆ ಓಡಿ ಬಂದು ಬಚಾವಾಗಿದ್ದಾರೆ.

ಇದೀಗ ಅಗ್ನಿಶಾಮಕ ದಳದಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.

Edited By : Nagesh Gaonkar
Kshetra Samachara

Kshetra Samachara

18/09/2020 03:15 pm

Cinque Terre

37.71 K

Cinque Terre

2

ಸಂಬಂಧಿತ ಸುದ್ದಿ