ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ,: ಕರ್ನಿರೆ ಬಳಿಯ ನದಿಯಲ್ಲಿ ಅಪರಿಚಿತ ಶವ ಪತ್ತೆ

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಿರೆ ಸಮೀಪದ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ನದಿಯಲ್ಲಿ ಶವ ಕಂಡು ಕೂಡಲೇ ಸ್ಥಳೀಯರಾದ ಕರ್ನಿರೆಬೈಲು ಪ್ರದೇಶದ ರೋಷನ್ ಡಿಸೋಜ ಅವರು ಕಾರ್ನಾಡು ಆಪತ್ಬಾಂಧವ ಆಸಿಫ್ ಅವರಿಗೆ ಕರೆ ಮಾಡಿ ದಾಗ ತಕ್ಷಣ ಧಾವಿಸಿ ಬಂದ ಅವರು, ದೋಣಿಯ ಮೂಲಕ ಸಾಗಿ ಶವವನ್ನು ದಡ ಸೇರಿಸಿ ಮುಲ್ಕಿ ಪೊಲೀಸರ ನೆರವಿನಿಂದ ಮುಲ್ಕಿ ಆರೋಗ್ಯ ಸಮುದಾಯ ಕೇಂದ್ರದ ಶವಾಗಾರಕ್ಕೆ ಸಾಗಿಸಲಾಯಿತು.

ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಅಪರಿಚಿತ ಶವದ ಬಗ್ಗೆ ಮಾಹಿತಿ ಇದ್ದರೆ ಮುಲ್ಕಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

Edited By : Nagesh Gaonkar
Kshetra Samachara

Kshetra Samachara

23/12/2020 01:02 pm

Cinque Terre

29.54 K

Cinque Terre

0

ಸಂಬಂಧಿತ ಸುದ್ದಿ