ಮಂಗಳೂರು: ನಗರದ ಹೊರವಲಯದ ಬೋಂದೆಲ್ ಸಮೀಪದ ಮಂಜಲ್ ಪಾದೆ ಬಳಿ ಗುಡ್ಡಕಾಡು ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲಿಗೆ ಭಾಗಶ: ಆ ಪ್ರದೇಶಕ್ಕೆ ಆವರಿಸಿತ್ತು!
ಈ ಸಂದರ್ಭ ಈ ರಸ್ತೆಯ ಮೂಲಕ ಕಾರಿನಲ್ಲಿ ಬರುತ್ತಿದ್ದ ಸಹೃದಯ ಯುವಕರ ತಂಡವೊಂದು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು.
ಬೆಂಕಿ ಜ್ವಾಲೆಯನ್ನು ಲೆಕ್ಕಿಸದೆ, ಸೊಪ್ಪುಗಳ ಮೂಲಕ ಈ ಯುವಕರು ಕಷ್ಟಪಟ್ಟು ಅಗ್ನಿಯನ್ನು ನಂದಿಸಿ, ಸಂಭವನೀಯ ಅನಾಹುತ ತಪ್ಪಿಸಿದ್ದಾರೆ.
ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವಕರ ಸಮಾಜಮುಖಿ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
Kshetra Samachara
22/12/2020 04:52 pm