ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದಲ್ಲಿ ಆಗಾಗ ಚಿರತೆಗಳು ದಾಳಿ ಮಾಡುತ್ತಿದ್ದು ಜನರು ಆತಂಕಕ್ಕೀಡಾಗಿದ್ದಾರೆ.
ಕಷ್ಟಪಟ್ಟು ಹೈನುಗಾರಿಕೆಯಲ್ಲಿ ತೊಡಗಿಕೊಂಡು ಹಸುಗಳನ್ನು ಸಾಕುತ್ತಿರುವ ಕುಟುಂಬಗಳಿಗೆ ಇದೀಗ ಚಿರತೆಗಳ ಹಾವಳಿ ಯಿಂದ ಬೇಸತ್ತು ಹೋಗಿದ್ದಾರೆ.
ಅನೇಕ ಬಾರಿ ದನದ ಕೊಟ್ಟಿಗೆ ಗಳಿಗೆ ನುಗ್ಗಿ ಹಸುಗಳನ್ನು ಕೊಂಡೊಯ್ದ ಘಟನೆ ನಡೆದಿದೆ. ಸಂಬಂಧಪಟ್ಟ ಉಪವಲಯ ಅರಣ್ಯ ಅಧಿಕಾರಿಗಳಿಗೆ ಈ ಬಗ್ಗೆ ಕೇಳಿದರೆ ಅವರು ಕೊಡುವ ಉತ್ತರ ಹೀಗೆ.
ಆದರೆ ಸಾಲಸೂಲ ಮಾಡಿ ಒಂದು ಕಡೆ ಹಸುಗಳನ್ನು ಕಳೆದುಕೊಂಡ ರೈತರು ಕಂಗೆಟ್ಟು ಹೋಗಿದ್ದಾರೆ,
ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ ಅನೇಕ ಬಾರಿ ಅರಣ್ಯಾಧಿಕಾರಿಗಳಿಗೆ ವಿಷಯವನ್ನು ಮುಟ್ಟಿಸಿದ್ದಾರೆ ಹಾಗೂ
ಮಹಿಳೆಯರು ಮಕ್ಕಳು ಕಾಡಿನ ಮಾರ್ಗದಲ್ಲಿ ನಡೆದಾಡುವಾಗ ಏನಾದರೂ ಅನಾಹುತ ಆಗುತ್ತದೆ ಎಂಬ ವಿಚಾರವನ್ನು ಕೂಡ ವ್ಯಕ್ತಪಡಿಸಿದ್ದಾರೆ,
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎನ್ನುವುದು ಇವರ ಒತ್ತಾಯವಾಗಿದೆ.
ಸಂದೇಶ್ ಶೆಟ್ಟಿ ಆಜ್ರಿ,ಪಬ್ಲಿಕ್ ನೆಕ್ಸ್ಟ್ ಉಡುಪಿ
Kshetra Samachara
19/12/2020 04:00 pm