ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡು ಬೈಪಾಸ್ ಬಳಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ.
ಬಳ್ಕುಂಜೆ ಮಾಗಂದಡಿ ನಿವಾಸಿ ಸ್ಟ್ಯಾನ್ಲಿ ಮಸ್ಕರೇನಸ್( 55) ಗಾಯಗೊಂಡವರು. ಸ್ಟ್ಯಾನ್ಲಿ ಮಸ್ಕರೇನಸ್ ಸ್ಕೂಟರ್ ನಲ್ಲಿ ಬಳ್ಕುಂಜೆ ಯಿಂದ ಕೆಲಸದ ನಿಮಿತ್ತ ಮುಲ್ಕಿಯ ಚಿತ್ರಾಪು ಕಡೆಗೆ ಹೋಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಕಾರ್ನಾಡು ಬೈಪಾಸ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದಾಗ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಸವಾರನ ಹೆಲ್ಮೆಟ್ ತುಂಡಾಗಿ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾರ್ನಾಡ್ ಮೈಮುನಾ ಫೌಂಡೇಶನ್ ನ ಆಸಿಫ್ ಮತ್ತು ಸ್ಥಳೀಯ ರಿಕ್ಷಾ ಚಾಲಕರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು. ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Kshetra Samachara
17/12/2020 03:18 pm