ಕಾಪು : ಸ್ಕೂಟಿಗೆ ಕಂಟೈನರ್ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶಿರ್ವ ಮುಖ್ಯ ರಸ್ತೆಯ ನ್ಯಾರ್ಮ ಸೇತುವೆ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.
ಶಿರ್ವದಿಂದ ಉಡುಪಿ ಕಡೆ ಹೋಗುತ್ತಿದ್ದ ಕಂಟೈನರ್ ನ್ಯಾರ್ಮ ಇಳಿಜಾರಿನಲ್ಲಿ ಚಲಿಸುವಾಗ ಓವರ್‌ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಶಿರ್ವ ಮಸೀದಿ ಕಡೆ ಹೋಗುವ ಸ್ಕೂಟಿಗೆ ಡಿಕ್ಕಿ ಹೊಡೆದು ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಚಾಲಕ ಬ್ರೇಕ್ ಹಾಕಿದರೂ ಕಂಟೈನರ್‌ನ ಬಂಪರ್‌ಗೆ ಸಿಲುಕಿಕೊಂಡ ಸ್ಕೂಟಿಯನ್ನು ಸುಮಾರು 50 ಮೀ. ದೂರ ಎಳೆದುಕೊಂಡು ಹೋಗಿದೆ.
ಸ್ಕೂಟಿ ಸವಾರ ಶಿರ್ವ ಮಸೀದಿ ಬಳಿಯ ನಿವಾಸಿ ಜಾನ್ಸನ್ ಡಿಸೋಜ (34) ರಿಗೆ ತಲೆಗೆ ಗಂಭೀರ ಗಾಯವಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹಸವಾರ ರೋಹನ್ ಡಿಸೋಜ (14) ಕೂಡ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.
Kshetra Samachara
24/11/2020 11:56 am