ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬೈಕ್ ಗೆ ಬೈಕ್ ಡಿಕ್ಕಿ ಸವಾರ ಗಂಭೀರ; ಆಸ್ಪತ್ರೆಗೆ ದಾಖಲು

ಮುಲ್ಕಿ: ಮುಲ್ಕಿ ನ.ಪಂ. ವ್ಯಾಪ್ತಿ ಪೊಲೀಸ್ ಠಾಣೆಯ ಮೂರು ಮಾರ್ಗ ರಸ್ತೆ ಬಳಿ ಬೈಕಿಗೆ ಬೈಕ್ ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಲ್ಕಿ ಕೆಎಸ್ ರಾವ್ ನಗರ ನಿವಾಸಿ ಮಹಮ್ಮದಾಲಿ ಗಾಯಾಳು. ಮುಲ್ಕಿ ಕಡವಿನ ಬಾಗಿಲು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್ ಹಾಗೂ ರಾ.ಹೆ.ಯಿಂದ ವಿಜಯ ಕಾಲೇಜು ಕಡೆಗೆ ಹೋಗುತ್ತಿದ್ದ ಬೈಕ್ ಪೊಲೀಸ್ ಠಾಣೆ ಬಳಿಯ ಮೂರು ರಸ್ತೆ ಸೇರುವಲ್ಲಿ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಬೈಕ್ ಸವಾರ ರಸ್ತೆ ಬದಿ ಬಿದ್ದು ತಲೆಗೆ ಗಂಭೀರ ಗಾಯಗೊಂಡು ನರಳಾಡುತ್ತಿರುವಾಗ ಸ್ಥಳೀಯ ಪಂ. ಸದಸ್ಯ ಬಾಲಚಂದ್ರ ಕಾಮತ್ ಮತ್ತು ಪುಷ್ಪರಾಜ ಕೊಲಕಾಡಿ ಕೂಡಲೇ ಕಾರಿನಲ್ಲಿ ಮುಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೂರು ಮಾರ್ಗ ಜಂಕ್ಷನ್ ಬಳಿ ಜನನಿಬಿಡ ಪ್ರದೇಶವಾಗಿದ್ದು ಕಳೆದ ಹಲವಾರು ವರ್ಷಗಳಿಂದ ಅನೇಕ ಅಪಘಾತಗಳು ನಡೆಯುತ್ತಿದೆ. ರಸ್ತೆಗೆ ಸೂಕ್ತ ಹಂಪ್ಸ್ ಅಳವಡಿಸುವಂತೆ ಮುಲ್ಕಿ ನ.ಪಂ. ಸದಸ್ಯ ಬಾಲಚಂದ್ರ ಕಾಮತ್ ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

15/11/2020 11:49 am

Cinque Terre

24.57 K

Cinque Terre

0

ಸಂಬಂಧಿತ ಸುದ್ದಿ