ಉದ್ಯಾವರ: ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ಉಡುಪಿ ಸಮೀಪದ ಉದ್ಯಾವರ ಬೈಪಾಸ್ ಬಳಿ ಶನಿವಾರ ಸಂಭವಿಸಿದೆ.
ಬೈಕ್ ಸವಾರ ಬಾಗಲಕೋಟೆ ಮೂಲದ ಉದ್ಯಾವರ ಮೇಲ್ಪೇಟೆ ನಿವಾಸಿ ಗುರುನಾಥ್ ಹಾಗೂ ಸಹಸವಾರ ಗಾಯಗೊಂಡವರು.
ಗುರುನಾಥ್ ಅವರು ಸಹ ಸವಾರನನ್ನು ಕುಳ್ಳಿರಿಸಿ ಬೈಕ್ ಸವಾರಿ ಮಾಡಿಕೊಂಡು ಉದ್ಯಾವರದಿಂದ ಕಾಪು ಕಡೆಗೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರ ಬೈಪಾಸ್ ಬಳಿ ಹಿಂದಿನಿಂದ ಬಂದ ಬುಲೆಟ್ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ.
ಘಟನೆಯಿಂದ ಸವಾರ ಹಾಗೂ ಸಹ ಸವಾರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Kshetra Samachara
07/11/2020 09:01 am