ಮುಲ್ಕಿ: ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಕಟೀಲು ದ್ವಾರದ ಬಳಿ ಟವೇರಾ ಕಾರು ಮತ್ತು ಟೆಂಪೋ ನಡುವೆ ಅಪಘಾತ ನಡೆದು ಟೆಂಪೋದಲ್ಲಿದ್ದ ಯುವಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರನ್ನು ಕುಂದಾಪುರ ನಿವಾಸಿ ರಾಜೇಶ್ (39) ಎಂದು ಗುರುತಿಸಲಾಗಿದೆ. ಕಟೀಲಿನಿಂದ ಮೂಡಬಿದ್ರೆ ಕಡೆಗೆ ಹೋಗುತ್ತಿದ್ದ ತುಮಕೂರು ಮೂಲದ ಟವೇರಾ ಕಾರು ಮೂರುಕಾವೇರಿ ದ್ವಾರದ ಬಳಿ ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿಗೆ ಏಕಾಏಕಿ ಬಲಗಡೆಗೆ ತಿರುಗಿಸಿದ ಪರಿಣಾಮ ಮೂಡಬಿದ್ರೆಯಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ಲೈನ್ ಸೇಲ್ ಟೆಂಪೋ ಚಾಲಕ ಗಲಿಬಿಲಿಗೊಂಡು ಅಪಘಾತ ನಡೆದಿದೆ. ಅಪಘಾತದಿಂದ ಲೈನ್
ಸೇಲ್ ಟೆಂಪೋ ಚಾಲಕನಿಗೆ ಗಾಯವಾಗಿದ್ದು, ಕೂಡಲೇ ಸ್ಥಳದಲ್ಲಿದ್ದ ಕಟೀಲು ಎಕ್ಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಟ್ಯಾನಿ ಪಿಂಟೋ ಹಾಗೂ ಮಾಜಿ
ಜಿಪಂ ಸದಸ್ಯೆ ಶೈಲಾ ಸಿಕ್ವೇರಾ ಗಾಯಾಳುವನ್ನು ಮುಕ್ಕ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಘಾತಕ್ಕೆ ಟವೇರಾ ಕಾರಿನ ಚಾಲಕನ ನಿರ್ಲಕ್ಷವೇ ಕಾರಣ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿದೆ. ಇಲ್ಲಿ ನಿರಂತರ ಅಪಘಾತ ಸಂಭವಿಸುತ್ತಿದ್ದು, ಸೂಚನಾ ಫಲಕ ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
28/10/2020 07:34 pm