ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಬಾವಿ ನಿರ್ಮಾಣ ಕಂಟ್ರಾಕ್ಟರ್ ಬಾವಿಗೇ ಹಾರಿ ಆತ್ಮಹತ್ಯೆ!

ಬ್ರಹ್ಮಾವರ: ಆರ್ಥಿಕ ಸಂಕಷ್ಟದಿಂದ ಮನನೊಂದ ಗುತ್ತಿಗೆದಾರರೊಬ್ಬರು ಸ್ಥಳೀಯ ಶಾಲೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕು ಪಾಂಡೇಶ್ವರದಲ್ಲಿ ನಡೆದಿದೆ.

ಅಬ್ಬಾಸ್ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರರು. ಬಾವಿ ನಿರ್ಮಾಣ ಕಾರ್ಯ ಮಾಡುವ ಗುತ್ತಿಗೆದಾರರಾಗಿದ್ದ ಅಬ್ಬಾಸ್

ಶಾಲೆಯ ಆವರಣದಲ್ಲಿಯೇ ಯೋಚಿಸುತ್ತ ಕುಳಿತಿದ್ದರು.

ಬಳಿಕ ಪರಿಚಯಸ್ಥರಿಗೆ ತನ್ನ ಬಳಿಯಲ್ಲಿದ್ದ ಚೀಟಿ ಹಾಗೂ ಮೊಬೈಲ್ ಕೊಟ್ಟಿದ್ದರು. ಚೀಟಿ ಮತ್ತು ಮೊಬೈಲ್ ಮನೆಗೆ ಕೊಟ್ಟು ಬನ್ನಿ ಎಂದಿದ್ದ ಅಬ್ಬಾಸ್, ಮನೆಯವರು ಶಾಲೆ ಬಳಿ ಬರುವ ಮೊದಲೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆರ್ಥಿಕ ಸಂಕಷ್ಟದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
Kshetra Samachara

Kshetra Samachara

23/10/2020 10:30 am

Cinque Terre

30.78 K

Cinque Terre

2

ಸಂಬಂಧಿತ ಸುದ್ದಿ