ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೆಂಚನಕೆರೆಯಲ್ಲಿ ಮರದ ಗೆಲ್ಲು ಬಿದ್ದು ವಿದ್ಯುತ್ ಕಂಬಗಳು ಧರಾಶಾಹಿ: ಮಗುವಿನ ರಕ್ಷಣೆ

ಮುಲ್ಕಿ: ಮುಲ್ಕಿ ಸಮೀಪದ ಕೆಂಚನಕೆರೆಯಲ್ಲಿ ಮಧ್ಯಾಹ್ನ ಬೀಸಿದ ಭಾರಿ ಗಾಳಿಗೆ ಮರದ ಗೆಲ್ಲು ತುಂಡಾಗಿ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ 5 ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ.

ವಿದ್ಯುತ್ ಕಂಬ ಬೀಳುವ ಸಂದರ್ಭ ಸ್ಥಳದಲ್ಲಿ ಸೈಕಲಿನಲ್ಲಿ ಆಟವಾಡುತ್ತಿದ್ದ ಸ್ಥಳೀಯರಾದ ಮೊಹಮ್ಮದ್ ಸಮೀರ್ ಎಂಬವರ ಎರಡೂವರೆ ವರ್ಷದ ಮಗುವನ್ನು ನೆರೆಮನೆಯವರಾದ ಆಶಾ ಕಾರ್ಯಕರ್ತೆಯ ಮಗಳು ಸ್ವಾತಿ ರಕ್ಷಣೆ ಮಾಡಿದ್ದಾರೆ.

ಏಕಾಏಕಿ ನಡೆದ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಮುಲ್ಕಿ ಮೆಸ್ಕಾಂ ಅಧಿಕಾರಿ ವಿವೇಕಾನಂದ ಮತ್ತು ಸಿಬ್ಬಂದಿ ಮರವನ್ನು ತುಂಡರಿಸಿ ನೂತನ ವಿದ್ಯುತ್ ಕಂಬ ಅಳವಡಿಸಿದ್ದಾರೆ.

ವಿದ್ಯುತ್ ಕಂಬ ಧರಾಶಾಹಿ ವೇಳೆಯಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ತಿರುವಿನ ಎಡಬದಿಯ ಏರು ರಸ್ತೆಯಲ್ಲಿರುವ ಕಾಲೊನಿ ಮನೆಗಳ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಮನೆಗೆ ಅಳವಡಿಸಲಾಗಿದ್ದು, ಭಾರಿ ಗಾಳಿಯಿಂದ ಮರದ ಗೆಲ್ಲು ಬಿದ್ದು ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ ಹಾಗೂ ಸ್ಥಳೀಯ ಮನೆಯೊಂದರ ಆವರಣಗೋಡೆಗೆ ಹಾನಿಯಾಗಿದೆ.

ಘಟನೆಯಿಂದ ಮೆಸ್ಕಾಂಗೆ ಭಾರೀ ನಷ್ಟವುಂಟಾಗಿದೆ. ಘಟನೆಯಲ್ಲಿ ಮಗುವಿನ ಜೀವ ಉಳಿಸಿದ ಸ್ವಾತಿ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Edited By :
Kshetra Samachara

Kshetra Samachara

20/10/2020 09:57 pm

Cinque Terre

18.95 K

Cinque Terre

0

ಸಂಬಂಧಿತ ಸುದ್ದಿ